ಸಂಪ್ರದಾಯಸ್ಥ ಮುಸ್ಲಿಮ್ ಕುಟುಂಬದಿಂದ ಬಂದ ಸಫಿಯಾ ತನ್ನ ಉದಾರವಾದಿ ಪತಿ ಅಬ್ಬಾಸ್ ಉತ್ತೇಜನದಿಂದ ನಿರ್ದಿಷ್ಟ ನಿಲುವು ಮತ್ತು ಆತ್ಮಸ್ಥೈರ್ಯವನ್ನು ತಾಳಿ; ಎಲ್ಲ ಬಗೆಯಲ್ಲಿ ವಿಮೋಚಿತರಾದ ಮಹಿಳೆಯರ ಸಬಲತೆಯಿಂದಲೇ ಶಕ್ತಿ ಪಡೆಯುವ ಮುಕ್ತ ಭಾರತದ ಕನಸನ್ನು ಕಾಣುತ್ತಾಳೆ. ಸ್ವಾತಂತ್ರ್ಯ ಪೂರ್ವದ ಒಂದೆರಡು ವರ್ಷಗಳಿಂದ ಹಿಡಿದು ಪ್ರಸಿದ್ಧ ಶಾಹ್ಬಾನೂ ಪ್ರಕರಣದವರೆಗಿನ ಪ್ರಕ್ಷುಬ್ಧ ಭಾರತದ ಪರಿಸರದಲ್ಲಿ ಕಥೆಯು ನೆಲೆಗೊಳ್ಳುತ್ತದೆ. ಹೋರಾಟದ ಹಾದಿಯಲ್ಲಿ ಪತಿ-ಪತ್ನಿ ಇಬ್ಬರೂ ಸಾಯುತ್ತಾರೆ: ‚ಮುಸ್ಲಿಮ್ ಮಹಿಳೆಯರ ದುರವಸ್ಥೆ ಮತ್ತು ಮೂಲಭೂತವಾದಿಗಳ ಮತಾಂಧತೆಯನ್ನು ಅರ್ಥ ಮಾಡಿಕೊಳ್ಳಲು ಮುಸ್ಲಿಮರು ಮತ್ತು ಹಿಂದುಗಳು ಎಲ್ಲರೂ ಓದಲೇಬೇಕಾದ ಒಂದು ಪುಸ್ತಕ‘ (‚ಆರ್ಗನೈಜರ್‘). ಈ ಕೃತಿಯು 2011ರ ಫೌಂಡೇಶನ್ ಆಫ್ ಸಾರ್ಕ್ ಲಿಟರೇಚರ್ ಪ್ರಶಸ್ತಿಯನ್ನು ಪಡೆದಿದೆ.
Medium: Audio Books
Bildformat:
Studio: Storyside IN
Erscheinungsdatum: