ಪೆರು ಕಣಿವೆಗೆಂದು ಹೊರಟು; ಪರವಾನಗಿ ಇಲ್ಲದಿದ್ದರೂ ಅಕ್ಕಪಕ್ಕದ ದೇಶಗಳಲ್ಲೂ ಸುಳಿದಾಡಿದ ರೋಮಾಂಚನಕಾರಿ ಚಿತ್ರಣ ಇಲ್ಲಿ ಸಿಗುತ್ತದೆ. ಅಲ್ಲಿ ಎದುರಾಗುವ ಭಾಷೆಯ ಸಮಸ್ಯೆಯನ್ನು ತಮ್ಮದೇ ಕೈ ಬಾಯಿ ಸನ್ನೆಗಳ ಮೂಲಕ ನಿಭಾಯಿಸಿಕೊಂಡು; ಅದೇ ರೀತಿ ಆಹಾರದ ಪ್ರಶ್ನೆಯನ್ನು ಬಗೆಹರಿಸಿಕೊಂಡು; ನಮ್ಮ ಜನರಂತೆಯೇ ಆದರಿಸುವ; ಪ್ರೀತಿಸುವ; ಸ್ನೇಹಭಾವ ತೋರಿಸುವ ಜನರನ್ನು ಭೇಟಿ ಮಾಡಿದ ಅನುಭವಗಳನ್ನು ಲೇಖಕಿ ಇಲ್ಲಿ ಸ್ವಾರಸ್ಯಕರವಾಗಿ ವರ್ಣಿಸಿದ್ದಾರೆ. ಗೆಳತಿಯ ಜೊತೆಗೂಡಿ ಬೆಟ್ಟವೇರಿ; ಕಣಿವೆ ಇಳಿದು; ಅಮೆಜಾನ್ ನದಿಯಲ್ಲಿ ರಾತ್ರಿ ದೋಣಿ ಪಯಣ ಮಾಡಿದ ರೋಮಾಂಚಕ ಸನ್ನಿವೇಶಗಳನ್ನು; ಮಹಿಳೆಯರ ಅಪೂರ್ವ ಸಾಧನೆಯನ್ನು ನೇಮಿಚಂದ್ರ ಅವರು ಇಲ್ಲಿ ಕುತೂಹಲಭರಿತವಾಗಿ ದಾಖಲಿಸಿದ್ದಾರೆ.
Medium: Audio Books
Bildformat:
Studio: Storyside IN
Erscheinungsdatum: